ಕಿಚ್ಚ ಹುಚ್ಚ 2010 ರ ಕನ್ನಡ ಭಾಷೆಯ ಆಕ್ಷನ್ ಮತ್ತು ರೊಮ್ಯಾಂಟಿಕ್ ಕಥೆಯ ಚಲನಚಿತ್ರವಾಗಿದ್ದು, ಸುದೀಪ್, ರಮ್ಯಾ ಮತ್ತು ಶ್ರೀನಾಥ್ ನಟಿಸಿದ್ದಾರೆ. ಇದನ್ನು ಗುರುದತ್ ಮತ್ತು ಕೆ ಮಂಜು ನಿರ್ಮಿಸಿದ್ದಾರೆ. ಚಲನಚಿತ್ರವು 15 ಅಕ್ಟೋಬರ್ 2010 ರಂದು ಬಿಡುಗಡೆಯಾಯಿತು. ಈ ಚಲನಚಿತ್ರವು ನಂತರ 2012 ತೆಲುಗಿನಲ್ಲಿ ಕಿಚ್ಚ ಎಂಬ ಹೆಸರಿನಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ತಮಿಳಿನ ಯಶಸ್ವಿ ಚಿತ್ರ ಚಿಥಿರಂ ಪೆಸುತಡಿಯ ರೀಮೇಕ್ ಆಗಿದ್ದು, ಇದನ್ನು ತೆಲುಗಿನಲ್ಲಿ ರಾಜು ಭಾಯ್ ಮತ್ತು ಒಡಿಯಾದಲ್ಲಿ ಅಭಿಮನ್ಯು ಎಂದು ರೀಮೇಕ್ ಮಾಡಲಾಗಿದೆ. ಈ ಚಲನಚಿತ್ರವನ್ನು ನಂತರ 2012 ರಲ್ಲಿ ಏಕ್ ಔರ್ ಲಡಾಕು ಎಂದು ಹಿಂದಿಗೆ ಡಬ್ ಮಾಡಲಾಯಿತು. == ಪಾತ್ರವರ್ಗ == ಕಿಚ್ಚನ ಪಾತ್ರದಲ್ಲಿ ಸುದೀಪ್ ಐಶ್ವರ್ಯ ಪಾತ್ರದಲ್ಲಿ ರಮ್ಯಾ ರಂಗಾಯಣ ರಘು ಶ್ರೀನಾಥ್ ನಾರಾಯಣ ಸ್ವಾಮಿ ಗಿರೀಶ್ ಶಿವಣ್ಣ ಬಿಯಾಂಕಾ ದೇಸಾಯಿ == ಧ್ವನಿಮುದ್ರಿಕೆ == ಯೋಗರಾಜ್ ಭಟ್ ಸಾಹಿತ್ಯ ಬರೆದಿರುವ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. == ಬಾಹ್ಯ ಕೊಂಡಿಗಳು == @ ಐ ಎಮ್ ಡಿ ಬಿ == ಉಲ್ಲೇಖಗಳು ==